ಗರ್ಭಾವಸ್ಥೆಯಲ್ಲಿ ಮೂರು ರೋಗಗಳಿಂದ ರಕ್ಷಣೆ ಪಡೆಯುವುದು ಸಾಧ್ಯವಿರುವಾಗ, ಒಂದೇ ರೋಗದೊಂದಿಗೆ ಏಕೆ ಹೋರಾಡುವಿರಿ?

ಗರ್ಭಾವಸ್ಥೆಯಲ್ಲಿ, ಹೆಚ್ಚಿನ ಮಹಿಳೆಯರು ಟೆಟಾನಸ್ ಚುಚ್ಚುಮದ್ದುಗಳನ್ನು ಸ್ವೀಕರಿಸುತ್ತಾರೆ. ಆದರೆ ಈಗ ನೀವು ಮತ್ತು ನಿಮ್ಮ ಮಗು ಟೆಟಾನಸ್, ಡಿಫ್ತೀರಿಯಾ ಮತ್ತು ಪರ್ಟುಸಿಸ್ ಈ 3 ರೋಗಗಳಿಂದ ರಕ್ಷಣೆ ಪಡೆಯುವುದು ಸಾಧ್ಯ. ಒಟ್ಟಿಗೆ ಮೂರೂ ರೋಗಗಳಿಂದ ರಕ್ಷಣೆ.

ಟೆಟಾನಸ್ ನರ ಸಂಬಂಧಿ ರೋಗವಾಗಿದ್ದರೆ, ಡಿಫ್ತೀರಿಯಾ ಗಾಳಿ ಮಾರ್ಗಗಳಲ್ಲಿ ಅಡಚಣೆಯುಂಟು ಮಾಡಬಹುದಾದ ಗಂಟಲ ಸೋಂಕಾಗಿದೆ ಮತ್ತು ಪರ್ಟುಸಿಸ್ ಗಂಭೀರ ಉಸಿರಾಟ ರೋಗವಾಗಿದ್ದು 2 ತಿಂಗಳಿಗಿಂತ ಕಡಿಮೆ ವಯಸ್ಸಿನ ಶಿಶುಗಳನ್ನು ಆಸ್ಪತ್ರೆಗೆ ಸೇರಿಸುವಂತೆ ಮಾಡಬಹುದು.

ಶಿಶುಗಳು ಜನನದ ವೇಳೆ ಈ ಮೂರು ರೋಗಗಳಿಂದ ಸರಿಯಾಗಿ ರಕ್ಷಿಸಲ್ಪಟ್ಟಿರುವುದಿಲ್ಲ. ಗರ್ಭಾವಸ್ಥೆಯಲ್ಲಿ ಲಸಿಕೆ ಹಾಕುವಿಕೆಯು ಎಲ್ಲ ಮೂರು ರೋಗಗಳಾದ - ಟೆಟಾನಸ್, ಡಿಫ್ತೀರಿಯಾ ಮತ್ತು ಪರ್ಟುಸಿಸ್ ಗಳಿಂದ ತಾಯಿಯ ಜೊತೆ ನವಜಾತ ಶಿಶುವನ್ನು ಕೂಡ ರಕ್ಷಿಸುತ್ತವೆ.

ಭಾವಿ ತಾಯಂದಿರಿಗಾಗಿ 3 ಇನ್ 1 ಲಸಿಕೆಯ ಬಗ್ಗೆ ಹೆಚ್ಚು ತಿಳಿಯಿರಿ

ಗರ್ಭಾವಸ್ಥೆಯಲ್ಲಿ 3 ಇನ್ 1 ಲಸಿಕೆಯ ಪ್ರಯೋಜನಗಳೇನು?

ಶಿಶುಗಳು ಜನಿಸಿದ ಸಮಯದಲ್ಲಿ ಪರ್ಟೂಸಿಸ್ ವಿರುದ್ಧ ಸಾಕಷ್ಟು ರಕ್ಷಣೆ ಹೊಂದಿರುವುದಿಲ್ಲ. ಪರ್ಟೂಸಿಸ್ಗೆ ಲಸಿಕೆ ಸಾಮಾನ್ಯವಾಗಿ 6-8 ವಾರಗಳಲ್ಲಿ ಆರಂಭವಾಗುತ್ತಿದ್ದು, ಇದು ಪರ್ಟೂಸಿಸ್ ರೋಗದ ಅಪಾಯ ಹೆಚ್ಚಿಸಲು ಮತ್ತು ಜನಿಸಿದ ಸಮಯದಲ್ಲಿ ಅಥವಾ ಮೊದಲ ಕೆಲವು ತಿಂಗಳಲ್ಲಿ ಅಪಾಯಗಳನ್ನು ಉಂಟುಮಾಡಲು ಕಾರಣವಾಗುತ್ತದೆ. ಗರ್ಭಾವಸ್ಥೆಯಲ್ಲಿ ಲಸಿಕೆ ಪಡೆಯುವುದರಿಂದ ತಾಯಂದಿರು ನವಜಾತ ಶಿಶುವಿಗೆ ಪರ್ಟೂಸಿಸ್ ನಿಂದ ರಕ್ಷಣೆ ನೀಡಲು ನೆರವಾಗುತ್ತದೆ.

ಪರ್ಟೂಸಿಸ್ ಎಂದರೇನು?

ಪರ್ಟೂಸಿಸ್ (ನಾಯಿಕೆಮ್ಮು ಎಂದೂ ಕರೆಯಲಾಗುತ್ತದೆ) ಅತ್ಯಧಿಕ ಸಾಂಕ್ರಾಮಿಕ ಶ್ವಾಸಕೋಶ ಸಂಬಂಧಿ ಸೋಂಕಾಗಿದ್ದು ಇದು ವಿಶೇಷವಾಗಿ ನವಜಾತ ಶಿಶುಗಳಿಗೆ ಹೆಚ್ಚು ಗಂಭೀರವಾಗುತ್ತದೆ. ಶಿಶುಗಳಲ್ಲಿ ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳೆಂದರೆ ದಮ್ಮಿನಿಂದ ಕೂಡಿದ ಅಥವಾ ಹೊರತಾದ ಕೆಮ್ಮು, ಉಸಿರಾಡಲು ಕಷ್ಟವಾಗುವುದು ಮತ್ತು ಪತ್ತೆಮಾಡಲು ಅಸಾಧ್ಯವಾದ ಕೆಲವು ಲಕ್ಷಣಗಳು.

ನನ್ನ ಮಗುವಿಗೆ ಪರ್ಟೂಸಿಸ್ ಹೇಗೆ ಉಂಟಾಗಬಹುದು?

ಪರ್ಟೂಸಿಸ್ ಸೋಂಕಿನ ಹನಿಗಳಿಂದ ಗಾಳಿಯ ಮೂಲಕ ಹರಡಬಹುದು, ಆದ್ದರಿಂದ ಇದು ರೋಗವಿರುವ ವ್ಯಕ್ತಿಗೆ ಸಮೀಪದಲ್ಲಿರುವುದು ಅಥವಾ ರೋಗವಿರುವ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಸುಲಭವಾಗಿ ವರ್ಗಾವಣೆಯಾಗುತ್ತದೆ. ನವಜಾತ ಶಿಶುಗಳಲ್ಲಿ ಪರ್ಟೂಸಿಸ್ ರೋಗದ ಮುಖ್ಯ ಮೂಲವೆಂದರೆ ತಾಯಿ. ಅವರೂ ಕೂಡ ರೋಗವಿರುವ ಅವರ ಸಹೋದರ ಅಥವಾ ಸಹೋದರಿಯರು, ಕುಟುಂಬದ ಇತರ ಸದಸ್ಯರು ಅಥವಾ ಆರೈಕೆದಾರರಿಂದ ಸೋಂಕಿಗೆ ಒಳಗಾಗುತ್ತಾರೆ.

ನನ್ನ ಮಗುವಿಗೆ ಪರ್ಟೂಸಿಸ್ ಕಂಡುಬಂದರೆ ಏನಾಗುತ್ತದೆ?

ಪರ್ಟೂಸಿಸ್ ಶಿಶುಗಳಲ್ಲಿ ಮತ್ತು 2 ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಗಂಭೀರವಾದ ಹಾಗೂ ಕೆಲವೊಮ್ಮೆ ಮಾರಣಾಂತಿಕವಾದ ಅಪಾಯ ಉಂಟುಮಾಡುತ್ತದೆ. ಶಿಶುಗಳು ಮತ್ತು ಚಿಕ್ಕಮಕ್ಕಳು ಕುಗ್ಗಿದಂತಾಗುತ್ತಾರೆ ಮತ್ತು ಉಸಿರಾಡಲು ಕಷ್ಟವಾಗುವುದರಿಂದ ನೀಲಿಬಣ್ಣಕ್ಕೆ ತಿರುಗುವ ಸಾಧ್ಯತೆ ಇರುತ್ತದೆ. ಅತ್ಯಂತ ಚಿಕ್ಕ ಮಕ್ಕಳಲ್ಲಿ ಕೆಮ್ಮನ್ನು ವಿಶೇಷವಾಗಿ ಗುರುತಿಸಲಾಗುವುದಿಲ್ಲ, ಬದಲಾಗಿ ಉಸಿರಾಟ ನಿಲ್ಲಿಸಿದ ನಂತರ ಮತ್ತೆ ಉಸಿರಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ. ಪರ್ಟೂಸಿಸ್ ಹೊಂದಿರುವ 2 ತಿಂಗಳಿಗಿಂತ ಕಡಿಮೆ ವಯಸ್ಸಿನ 90% ಮಕ್ಕಳು ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ.

3 ಇನ್ 1 ಲಸಿಕೆಯಿಂದ ಯಾವುದಾದರೂ ಪಾರ್ಶ್ವ ಪರಿಣಾಮಗಳಿದೆಯೇ?

ಲಭ್ಯವಿರುವ ಸಾಕ್ಷಿಗಳನ್ನು ಆಧರಿಸಿ, ಗರ್ಭಾವಸ್ಥೆಯಲ್ಲಿ 3 ಇನ್ 1 ಲಸಿಕೆ ಉತ್ತಮವಾದ ತಾಳಿಕೆ ಹೊಂದಿದೆ. ಗಮನಿಸಲಾದ ಅತ್ಯಂತ ಸಾಮಾನ್ಯ ಪಾರ್ಶ್ವ ಪರಿಣಾಮಗಳೆಂದರೆ ಇಂಜೆಕ್ಷನ್ ನೀಡಿದ ಸ್ಥಳದಲ್ಲಿ ಅಲ್ಪದಿಂದ ಸಾಧಾರಣ ನೋವು, ಊತ ಮತ್ತು ಕೆಂಪಾಗುವಿಕೆ.

ನನ್ನ ನವಜಾತ ಶಿಶುವನ್ನು ಪರ್ಟೂಸಿಸ್ನಿಂದ ರಕ್ಷಿಸುವ ಇತರ ವಿಧಾನಗಳು ಯಾವುವು?

ಚಿಕ್ಕ ಮಕ್ಕಳಲ್ಲಿ ಪರ್ಟೂಸಿಸ್ ತಡೆಗಟ್ಟಲು ವಿವಿಧ ವಿಧಾನಗಳಿದ್ದು ತಾಯಂದಿರಿಗೆ, ಕುಟುಂಬ ಸದಸ್ಯರು ಹಾಗೂ ಸಮೀಪವರ್ತಿಗಳಿಗೆ ಲಸಿಕೆ ಹಾಕುವುದನ್ನು ಒಳಗೊಂಡಿದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ಗರ್ಭಾವಸ್ಥೆಯಲ್ಲಿ ನಾನು 3 ಇನ್ 1 ಲಸಿಕೆ ಯಾವಾಗ ತೆಗೆದುಕೊಳ್ಳಬೇಕು?

ಗರ್ಭಾವಸ್ಥೆಯಲ್ಲಿ 3 ಇನ್ 1 ಲಸಿಕೆ ಪಡೆಯಲು ಸೂಕ್ತ ಸಮಯದ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿ.

3 ಇನ್ 1 ಪ್ರತಿಜ್ಞೆ ತೆಗೆದುಕೊಳ್ಳಿ

Go to top

References: ● WHO Position paper,Tetanus vaccines,Weekly epidemiological record, Feb 2017. ● Centers for Disease Control (CDC). Diphtheria. Symptoms.[accessed Oct 2019]; Available at : https://www.cdc.gov/diphtheria/about/symptoms.html ● Centers for Disease Control (CDC). Pertussis (Whooping Cough). Complications.[accessed Oct 2019]; Available at: https://www.cdc.gov/pertussis/about/complications.html

*The list of diseases mentioned here is as per the diseases featuring in the list of preventable diseases by IAP in their routine and catchup vaccination recommendations.
There could be diseases beyond the list which could affect the child. Please consult your pediatrician for more information.

Information appearing in this material is for general awareness only and does not constitute any medical advice. Please consult your physician for any question or concern you may have regarding your condition.
The doctor show in this material/ multimedia content is being used for illustrative purpose only and is a professional model.